Bigg Boss Kannada Season 5 : ಜಗನ್ ವಾರ್ನಿಂಗ್ ಕೊಟ್ಟ ಸುದೀಪ್ | Filmibeat Kannada

2017-11-13 2,787

Bigg Boss Kannada Season 5 : Week 4 : Sudeep warns Jagan & Sudeep advices Jaganath Chandrashekar to be calm.


ಜಗನ್ ಗೆ 'ಹುಷಾರು' ಎಂದು ಎಚ್ಚರಿಸಿ, ಬುದ್ಧಿಮಾತು ಹೇಳಿದ ಕಿಚ್ಚ ಸುದೀಪ್.! 'ಬಿಗ್ ಬಾಸ್' ಮನೆಗೆ ಕಾಲಿಟ್ಟ ದಿನದಿಂದಲೂ, 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್ ಚಂದ್ರಶೇಖರ್ ರವರ ವರ್ತನೆ ಬಗ್ಗೆ ವೀಕ್ಷಕರಿಗೆ ಬೇಸರ ಇದ್ದೇ ಇದೆ. ಸಂಬಂಧಪಡದ ವಿಚಾರಕ್ಕೆಲ್ಲ ಮೂಗು ತೂರಿಸಿ, ಕಣ್ಣನ್ನ ಕೆಂಪಗೆ ಮಾಡಿ, ಏರುದನಿಯಲ್ಲಿ ಮಾತನಾಡುವ ಜಗನ್ ಸ್ವಭಾವ ವೀಕ್ಷಕರಿಗೆ ಇಷ್ಟ ಆಗುತ್ತಿಲ್ಲ.ಇನ್ನೂ ಟಾಸ್ಕ್ ನಲ್ಲಿ ರೋಷಾವೇಶ ಮೆರೆಯುವ ಜಗನ್, ಕಳೆದ ವಾರದ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಸಮೀರಾಚಾರ್ಯ ರವರ ಶರ್ಟ್ ನ ಎಳೆದು ಹರಿದು ಹಾಕಿದ್ದರು. ಸಾಲದಕ್ಕೆ ದೊಡ್ಡ ರಾದ್ಧಾಂತಕ್ಕೆ ನಾಂದಿ ಹಾಡಿದ್ದರು.ಈ ಎಲ್ಲವನ್ನೂ ಗಮನಿಸಿದ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಜಗನ್ನಾಥ್ ಚಂದ್ರಶೇಖರ್ ಅವರಿಗೆ 'ಹುಷಾರು' ಎಂದು ಎಚ್ಚರಿಸಿ, ಬುದ್ಧಿ ಮಾತನ್ನು ಹೇಳಿದರು.